ವರ್ಷ -
	ಸೂರ್ಯನ ಸುತ್ತ 1 ಪರಿಭ್ರಮಣೆ ಪೂರೈಸಲು ಗ್ರಹ ತೆಗೆದುಕೊಳ್ಳುವ ಬಹುತೇಕ ಸ್ಥಿರ ಅವಧಿ (ಇಯರ್). ಭೂವರ್ಷದ ಅವಧಿ 365.2422 ದಿವಸಗಳು. ಸೂರ್ಯಸಮೀಪಗ್ರಹದ ವರ್ಷ ಸೂರ್ಯದೂರಗ್ರಹದ ವರ್ಷಕ್ಕಿಂತ ಹ್ರಸ್ವ. ಉದಾಹರಣೆಗೆ ಸೂರ್ಯ ಸಮೀಪತಮ ಗ್ರಹ ಬುಧದ ವರ್ಷ 88 ಭೂದಿವಸಗಳು, ಸೂರ್ಯ ದೂರತಮ (ಗೋಚರ) ಶನಿಯ ವರ್ಷ 29.46 ಭೂವರ್ಷಗಳು.   								
			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ